ನವ ತರುಣೆಯರ ಮನಸಿನ ಕನ್ನಡಿ ಅಂತ ಹೇಳಬಹುದು ಈ ಹಾಡು ..
Lyrics of this song
ಗೆಳೆಯ ಬೇಕು
ಯಾರಿಗೋ ಏನೇನೊ ನೀಡುವ ದೇವನೆ, ನನ್ನಯ ಮನವಿ ಸಲ್ಲಿಸಲೇನು ??
ಬೆಚ್ಚನೆ ಭಾವ ಮೂಡಿಸಿತಿರುವ , ಮನಸಿನ ಆಸೆ ಕೇಳುವೆ ಏನು ?
ನಾನು ಈಗ ಪ್ರೀತಿಯಲ್ಲಿ ಬೀಳಬೇಕು !
ನನಗು ಒಬ್ಬ ಗೆಳಯ ಬೇಕು !!
ಇದ್ದ್ದಲ್ಲಿ ಇದ್ದಹಾಗೆ ಸದ್ದನ್ನೇ ಆಗದಂತೆ ಹೃದಯ ಕದ್ದು ಹೋಗಬೇಕು ....
ನಾನು ಈಗ ಪ್ರೀತಿಯಲ್ಲಿ ಬೀಳಬೇಕು !
ನನಗು ಒಬ್ಬ ಗೆಳಯ ಬೇಕು !! ನೆನೆದಾಗೆಲ್ಲ ಹಾಗೇನೆ ಓಡಿ ಬರಬೇಕು, ಕಾದಗೆಲ್ಲ ಮುತ್ತಿನ ಗಂಧ ತರಬೇಕು ,
ಮತ್ತೆ ಮತ್ತೆ ಬರಬೇಕು ಹುಚ್ಚು ಸಂದೇಶ , ಕದ್ದು ಮುಚ್ಚಿ ಓದೋಕೆ ಹೆಚ್ಚಿ ಸಂತೋಷ ,
ಮುನಿಸು ಬಂದಾಗೆಲ್ಲ ಅವನೆ ಕ್ಷಮಿಸು ಅನಬೇಕು , ಚಂದಿರನ ತಟ್ಟೆಯಲ್ಲಿ ಸೇರಿ ತಿನಬೇಕು ,
ಎಲ್ಲರೂ ಜಾತ್ರೆಯಲ್ಲಿ ತೇರನ್ನೇ ನೋಡುವಾಗ , ಅವನು ನನ್ನೇ ನೋಡಬೇಕು
ಕಾಡುವಂಥ ಗೆಳೆಯ ಬೇಕು , ಇಂದು ನನ್ನ !! ಹಿಂದೆ ಮುಂದೆ ಸುಳಿಯಬೇಕು !!
ನಾನು ಈಗ ಪ್ರೀತಿಯಲ್ಲಿ ಬೀಳಬೇಕು !
ನನಗು ಒಬ್ಬ ಗೆಳಯ ಬೇಕು !!
ಇದ್ದಹಾಗೆನೆ ನನಗೆ ಚಂದ ಅನಬೇಕು , ಯಾಕೋ ಬೇಜಾರಾದಾಗ ಸುಮ್ಮನಿರಬೇಕು !!
ಮುದ್ದುನಗೆಯ ಹೂವನ್ನು ಮುಡಿಸಬರಬೇಕು, ಎಲ್ಲೊ ಮರೆತ ಹಾಡನ್ನು ಹೆಕ್ಕಿ ತರಬೇಕು ,
ಮಳೆಯ ತೀರದಲ್ಲಿ ಅವನು ನನಗೆ ಕಾದಂತೆ , ಕನ್ನಡಿಯಲ್ಲಿ ಬೆನ್ನ ಹಿಂದೆ ಅವನೆ ನಿನ್ನ್ತಂತೆ ,
ಗುಟ್ಟಾಗಿ ಹೃದಯದಲ್ಲಿ ಪ್ರೀತಿಯ ಖಾತೆಯೊಂದು ಜಂಟಿಯಾಗಿ ತೆರೆಯಬೇಕು ,
ದೇವರಂತ ಗೆಳಯ ಬೇಕು , ಹೇಳದೇನೆ ಅವನಿಗೆಲ್ಲ ತಿಳಿಯಬೇಕು !!
ನಾನು ಈಗ ಪ್ರೀತಿಯಲ್ಲಿ ಬೀಳಬೇಕು !
ನನಗು ಒಬ್ಬ ಗೆಳಯ ಬೇಕು !!
No comments:
Post a Comment